ಬೊಂಬೆ ಬದುಕು

ಜಗದದ್ಯಾಂತ ಮಾನವ ನಿರ್ಮಿತ 
ಬೊಂಬೆಗಳ ಮಾರುಕಟ್ಟೆ 
ನಾನೋ ಹೊಟ್ಟೆಪಾಡು ಹರಸುತ್ತ
ಬೊಂಬೆಯೊಳಗೆ ಸೇರಿಬಿಟ್ಟೆ
ದಿನಕ್ಕೊಂದು ರೀತಿ , ಅದರಂತೆ ವೇಷ
ಮಾತಿದ್ದರು ನನ್ನದು ಬರಿ ಮೂಖಭಾಷ
ನಿತ್ಯ ಹೊಸಬರ ನೋಡುವ ಅವಕಾಶ
ಹೇಗೋ ಸಂಪಾದಿಸುವೆ ನಾಲ್ಕುಕಾಸ
ಸಿಡುಕದೆ, ಧಣಿವೆನದೆ, ಕುಣಿಸಿ
ರಂಜಿಸುವುದೆ ನನ್ನ ಕಾಯಕ
ಕ್ಷಣಕ್ಕಾದರು ಚಿಂತಿ ಮರೆಸಿ
ವದನದಲ್ಲಿ ನಗುಬಿತ್ತಿನೆಂಬ ಸಾರ್ಥಕ
ಚಳಿ, ಗಾಳಿ, ಬಿಸಿಲುಗಳ
ಅರಿವೆಯು ನನಗಿಲ್ಲ
ಖುಷಿಯಾಗಿ ತಬ್ಬಿ ಮುತ್ತಿಟ್ಟು
ನಲಿದವರಾರು ನನ್ನವರಲ್ಲ
ಬಂಧುಗಳಂತೆ ಬಂದೊರಗಿದವರೆಲ್ಲ
ಬಂದ ದಾರಿಯಲ್ಲೆ ಹಿಂದಿರುಗುವರಲ್ಲ
ಮುಖಸವರಿ ಮುದ್ದಾಡಿದವರೆಲ್ಲ
ಮುಖವಾಡ ತೆರೆದರೆ ಗುರುತಿಸುವುದಿಲ್ಲ
ಮುಜುಗರವಾಗದೆ ಮತ್ತದೆ ವೇಷ ಧರಿಸಲು
ಗೊತ್ತಿರುವುದೊಂದೆ , ನಾನರಿಗು ಗೊತ್ತಿಲ್ಲವೆಂದು
ಬೊಂಬೆಯೊಳಗಿನ ಜೀವವ ಪರಿಚಯಿಸಲು
ಇವರಾರಿಗು ಹೊತ್ತಿಲ್ಲವೆಂದು
ನಾನೇನೋ ನಗುವೆ ಮುಖವಾಡದ ಹಿಂದೆ
ಇವರ ನಗು ಬರಿ ಭಾವಚಿತ್ರಕ್ಕೆಂದೆ
ನನ್ನ  ಅಭಿನಯ ವೇಷ ಒರೆಸುವ ತನಕ
ಆದರಿವರ ಭಾವನೆಗಳೆ ಕ್ರುತಕ
                                               
                                          — ಮೇಘನ

Leave a comment